

ಪರ್ಸೆಪೊಲಿಸ್ – ಮಾರ್ಜಾನ್ ಸತ್ರಪಿ | ಅನುವಾದ: ಪ್ರೀತಿ ನಾಗರಾಜ
ಬಾಲ್ಯದಲ್ಲಿ ತುಂತುರು, ಬಾಲಮಂಗಳದಲ್ಲಿ ಬರುತ್ತಿದ್ದ ಡಿಂಗ, ಶೇರು ತರಹದ ಚಿತ್ರಕಥೆಗಳು ತುಂಬಾ ಇಷ್ಟವಾಗಿದ್ದವು. ನಂತ್ರ ಗಂಭೀರ ಸಾಹಿತ್ಯ ಓದಲು ಶುರು ಮಾಡಿದ ಮೇಲೆ ಆ ಪ್ರಕಾರದಿಂದ ದೂರ ಸರಿದಿದ್ದೆ.
ಕನ್ನಡದಲ್ಲಿ ಪರ್ಸೆಪೊಲಿಸ್ ಎನ್ನುವ ಗ್ರಾಫಿಕ್ ಕಾದಂಬರಿ ಇದೆ ಎಂದು ತಿಳಿದ ಮೇಲೆ ಇದನ್ನು ಓದುವ ಮನಸ್ಸಾಯಿತು. ಇದು ಮೂಲತಃ ಫ್ರೆಂಚ್ ಭಾಷೆಯದ್ದು . “ಬಾಲ್ಯ ಮತ್ತು ಯೌವನದ ಕಥನ” ಅನ್ನೋ ಉಪಶೀರ್ಷಿಕೆಯಡಿ ಅನುವಾದಗೊಂಡಿದೆ.
ಕಥೆಯನ್ನು ಸರಳವಾಗಿ ಹೇಳೋದಾದರೆ — ಇರಾನ್‌ನ ರಾಜಕೀಯ ಬದಲಾವಣೆಗಳು , ಬಾಲಕಿಯ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಅನ್ನೋದನ್ನ ಹೇಳುತ್ತದೆ. (ಇದಕ್ಕಿಂತ ಹೆಚ್ಚು ಹೇಳಿದ್ರೆ spoiler ಆಗುತ್ತೆ ) ಅನುವಾದದ ಬಗ್ಗೆ ಹೇಳ್ಬೇಕಂದ್ರೆ — ಕೆಲವು ಕಡೆ ಸಂಭಾಷಣೆ ಸ್ವಲ್ಪ ಅಸಹಜವಾಗಿ ಅನಿಸುತ್ತದೆ. (ಅನುವಾದ ಸಾಹಿತ್ಯದಲ್ಲಿ ಸಾಮಾನ್ಯವಾಗಿ ಕಾಣೋ ಸಮಸ್ಯೆ ಇದೇ ಅನಿಸುತ್ತದೆ.)
ಸುಮಾರು 348 ಪುಟಗಳಲ್ಲಿ, ಆ ಬಾಲಕಿಯ ಆಂತರಿಕ, ವೈಚಾರಿಕ, ದೈಹಿಕ ಬೆಳವಣಿಗೆಯನ್ನ ಚೆನ್ನಾಗಿ ವಿವರಿಸಿದ್ದಾರೆ. ಜೊತೆಗೆ ಇರಾನ್‌ನ ರಾಜಕೀಯ/ಸಾಮಾಜಿಕ ಬದಲಾವಣೆಗಳನ್ನೂ ಓದಬಹುದು.
Overall: ಒಳ್ಳೆಯ ಪುಸ್ತಕ. ವಿಭಿನ್ನ ರೀತಿಯ ಓದಿನ ಅನುಭವ ಕೊಡುತ್ತದೆ — especially ಗ್ರಾಫಿಕ್ ಕಾದಂಬರಿ ಓದಿಲ್ಲ ಅಂದ್ರೆ definitely try ಮಾಡ್ಬಹುದು .